ಕರ್ಮಗಳು ಹೆಚ್ಚಾದಾಗಲೆಲ್ಲ ನದಿಗಳು ಉಕ್ಕಿವೆ


navaneeth



ಶ್ರೀಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳೊಂದಿ  ಗೆಳೆಯರೆ ನಿಮಗೆಲ್ಲ ಒಂದು ವಿಚಾರ ತಿಳಿಸೋಣ ಅಂತ ಸಮಯವಿದ್ದರೆ ಓದಿ.undefinedನವನೀತ್ ಗೌಡ್ರು
ಹಿಂದೆ ದ್ವಾಪರಯುಗದಲ್ಲಿ ಮಥುರಾ  ಅಂತ ನಗರವಿರುತ್ತದೆ ಆ ಸುಂದರ ನಗರಕ್ಕೆ ಕಂಸ ಅನ್ನೊ ಒಬ್ಬ ರಾಕ್ಷಸ ಅರಸು, ತಾಳೆ ನೋಡುತ್ತಾ ಹೋಗಿ ನಮ್ಮ ರಾಜ್ಯಕ್ಕೂ ಅವತ್ತಿನ ಮಥುರಾ ರಾಜ್ಯಕ್ಕೂ ಇರುವಂತ ಸಾಮ್ಯತೆಯನ್ನ .. ದೇವಕಿ ಅನ್ನೊ ಕಂಸನ ತಂಗಿಗೆ ಹುಟ್ಟೊ 8ನೇ ಮಗುವಿನಿಂದ ಕಂಸನ ಸಂಹಾರ ಅಂತ ಭವಿಷ್ಯವಿರುತ್ತದೆ. ಇದನ್ನ ಅರಿತ ಮರಣಭಯಿ ಕಂಸ 8ನೇ ಗರ್ಭಧರಿಸಿದ  ತನ್ನ ತಂಗಿ ದೇವಕಿ ಮತ್ತೆ ಭಾವ ವಾಸುದೇವನನ್ನ ಸೆರೆಮನೆಯಲ್ಲಿಟ್ಟರುತ್ತಾನೆ ಪ್ರಸವ ಕಾಲ ಬಂದೆಬಿಟ್ಟಿತು ದೇವಕಿ 'ಗಂಡುಮಗು'', ಜಗತ್ಪಾಲಕ, ಕರಿವರದ ಸುಂದರ, ನೀಲಮೇಘವರ್ಣ ಮನ್ಮಥ, ನವನೀತ ಚೋರನ ,ಜನನವಾಗುತ್ತದೆ. ಈ ಸಮಯದಲ್ಲಿ ಆಕಾಶವೆಲ್ಲ ಮೋಡಗಳನ್ನ ಭೂಮಿಗೆ ದೂಡುತ್ತಿದೆಯೇನೊ ಅನ್ನೊ ಹಾಗೆ ಪ್ರಚಂಡಮಳೆ ಗೆ ನದಿಗಳೆಲ್ಲ ಉಕ್ಕಿ ಹರಿಯುತ್ತವೆ ಅರ್ಥ ಕಂಶನ ಪಾಪದ ಕೊಳೆ ಕೊಚ್ಚಿ ಹೋಗಿ ಧರ್ಮಸ್ಥಾಪನೆಗೆ ಭಗವಂತ ಉದಯಿಸಿದ ಅಂತ. ನಮ್ಮಲ್ಲೂ ಅದೇ ಅಲ್ವಾ ಸ್ನೇಹಿತರೇ ಆಗುತ್ತಿರುವುದು ರಾಜ ಧರ್ಮಪಾಲಕನಾಗಿದ್ದರೆ ನಾಡೆಲ್ಲ ಸುಭಿಕ್ಷವಂತೆ. ಜನಗಳು ಧರ್ಮದಲ್ಲಿ ನಡೆಯುತ್ತಾರಂತೆ. ಆಗಿನ ಹಾಗೆ ಈಗಲೂ ಕೂಡ ಕೇಲವು ಅಂಧಾಭಿಮಾನವೂ ಮೂರ್ಖತನವೋ ಬಾಯಿತೆಗೆದರೆ ಸಾಕು ಬರಿ ಅವಾಚ್ಯಶಬ್ದಗಳು. ನಮ್ಮನ್ನು ಬಿಟ್ಟರೆ ಮತ್ಯಾರು ಪಂಡಿತರಿಲ್ಲ ಅನ್ನೊತಳ ಬುಡವಿಲ್ಲದ ವಾದಗಳು ಅಬ್ಬಾ ಇವೆಲ್ಲ ಕಂಶನ ರಾಜ್ಯದ ಮರುಸೃಷ್ಠಿಯಂತೆಯೇ ಇದೆ. ಆಗಲಿ ಧರ್ಮವಿದ್ದರೆ ಜಯವಿರುತ್ತೆ ಕಥೆ ನೋಡೋಣ. ವಾಸುದೇವ ಹುಟ್ಟಿದ ಕೂಸನ್ನ ,ಕಂಶಾಸುರನಿಂದ ರಕ್ಷಿಸಲು ಸಾಕು ತಂದೆ ನಂದರಾಜ, ತಾಯಿ ಯಶೋದೆಯಾ ಬಳಿ ಬಿಡಲು ತನ್ನ ತಲೆಯ ಮೇಲೆ ಮಗುವನ್ನ ಹೊತ್ತು ಬಾರಿ ಭಯಂಕರ ಮಳೆಯ ನಡುರಾತ್ರಿಯಲ್ಲೆ ಒರಡುತ್ತಾನೆ . ಬೆಂಬಿಡದ ಮಳೆ, ಯಮುನೆ ಉಕ್ಕಿ ಬೋರ್ಗರೆಯುತ್ತಿರುತ್ತಾಳೆ, (ಇವತ್ತೇನು ಹೊಸದಲ್ಲ ನದಿಗಳು ಉಕ್ಕುತ್ತಿರುವುದು ಪಾಪಕರ್ಮಗಳು ಹೆಚ್ಚಾದಗಲೆಲ್ಲ ಅಬ್ಬರಿಸಿವೆ)ಹೀಗಿರುವಾಗ ಎದೆಮಟ್ಟದ ನೀರಿನಲ್ಲಿ ದಾರಿ ಹಿಡಿದ ವಾಸುದೇವನಿಗೆ ತಲೆಯಮೇಲಿರುವವ. ಆದಿರಂಗಯ್ಯಾ, ಸನಾತನ ಧರ್ಮಸಂಸ್ಥಾಪಕ ಶ್ರೀ ಕೃಷ್ಣ ಪರಮಾತ್ಮನೆಂಬ ಅರಿವೆ ಇಲ್ಲ. ಎದೆಮಟ್ಟದ ನೀರು ತಲೆಮುಳುಗುವ ಹಂತಕ್ಕೆ ಬಂದರೂ ಲೆಕ್ಕಿಸದ ವಾಸುದೇವ ಮಗನನ್ನು ರಕ್ಷಿಸುವುದೊಂದೆ ಕಾರ್ಯಾದಲ್ಲಿ ಮುಳುಗಿರುವಾಗ ಯಮುನೆ ಅಲೆಯಾಗಿ ಸಾಗಿಬಂದು ಭಗವಂತನ ಪುಟ್ಟಪಾದಕ್ಕೆ ತಾಗುತ್ತಾಳೆ ತಕ್ಷಣ ಮಳೆ ಕಡಿಮೆಯಾಗಿ ನದಿ ತನಾಗಿಯೇ ವಾಸುದೇವ ಹೋಗಲು ದಾರಿಮಾಡಿ ಕೊಡುತ್ತದೆ ಎಂದು ಪುರಾಣ. ಇದನ್ನಯಾಕಪ್ಪ ಹೇಳ್ತಿದೇನೆ ಅಂದ್ರೆ ಅಧರ್ಮ ಅಳಿದು ಧರ್ಮ ಉಳಿವಿಗೆ ಜನಿಸಿದ ಶ್ರೀ ಕೃಷ್ಣಾ ದಿನ ನಮ್ಮ ರಾಜ್ಯದ ಅಧರ್ಮ ಅಳಿಯಲಿ ಅಕ್ರಮ ಅಧಿಕಾರ ನೆಲಕ್ಕುರುಳಿ . ಲೋಕ ಕಲ್ಯಾಣಕ್ಕಾಗಿ ಜನರ ಹೀತಕ್ಕಾಗಿ ಶ್ರಮಿಸುವ. ಜನತೆ ಮೆಚ್ಚಿದ ನಾಯಕರು ಮತ್ತೆ ಅಧಿಕಾರ ಹಿಡಿಯಲಿ ಎಂದು ಶ್ರೀ ಕೃಷ್ಣಾ ಆಶೀರ್ವಾದಿಸಲಿ. ಜಯತು ಜಯ ಹಿಂದೂ ರಾಷ್ಟ್ರ. ಧರ್ಮ ಸಂಸ್ಥಾಪನಾಯ ಸಂಭವಾಮಿ ಯುಘೇಯುಘೆ......

Share Article :




You may also like